ಪಕ್ಕದ ಮನೆಯಲ್ಲಿನ ಮೇಷ್ಟ್ರ ಮನೆಗೆ ರಾಮು ಹೋಗಿ ಕೇಳಿದ;
"ಸಾರ್ ಸ್ವಲ್ಪ ಡಿಕ್ಷನರಿ ಇದ್ರೆ ಕೊಡ್ತೀರಾ"?
ಮೇಷ್ಟ್ರು: "ಹೊರಗೆ ತೆಗೆದುಕೊಂಡು ಹೋಗಬಾರದು, ಇಲ್ಲಿಯೇ ಉಪಯೋಗಿಸಿ ಇಟ್ಟು ಹೋಗಬೇಕು".
ಮರುದಿನ ಮೇಷ್ಟ್ರು ರಾಮುವಿನ ಮನೆಗೆ ಬಂದರು.
ರಾಮು: "ಬನ್ನಿ ಸಾರ್, ಕುಳಿತುಕೊಳ್ಳಿ..:
ಮೇಷ್ಟ್ರು: "ಕುಳಿತುಕೊಳ್ಳಲು ಸಮಯವಿಲ್ಲ, ಸ್ವಲ್ಪ ಮನೆಯ ಧೂಳು ಒರೆಸುವ ಕಸಬರಿಕೆ ಬೇಕು"ಅಂದರು.
ರಾಮು: "ಅಯ್ಯೋ ನಿಮಗೆ ಇಲ್ಲ ಅನ್ನೊದುಕ್ಕಾಗುತ್ತಾ, ಅದರೆ ಹೊರಗೆ ತೆಗೆದುಕೊಂಡು ಹೋಗಕೂಡದು, ಇಲ್ಲಿಯೇ ಉಪಯೋಗಿಸಿ ಇಟ್ಟು ಹೋಗಬೇಕು" ಎಂದ.